ರೆಡಿಮೇಡ್ ಉಡುಪುಗಳಲ್ಲಿ ಸ್ಮಾರ್ಟ್, ಪರ್ಫಾರ್ಮಿನ್ಗ್, ಇಂಟೆಲಿಜೆಂಟ್ ಬಟ್ಟೆಗಳ ಬಳಕೆ

 ರೆಡಿಮೇಡ್ ಉಡುಪುಗಳಲ್ಲಿ ಸ್ಮಾರ್ಟ್, ಪರ್ಫಾರ್ಮಿನ್ಗ್, ಇಂಟೆಲಿಜೆಂಟ್ ಬಟ್ಟೆಗಳ ಬಳಕೆ 

ಪ್ರೊ: ನೆಲಮನೆ ಶ್ರೀನಿವಾಸನ್,
 ಡೀನ್ , ಆರ್ಮೀ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಅಂಡ್ ಡಿಸೈನ್, ಬೆಂಗಳೂರು. – ೭೭

ಆಕಾಶವಾಣಿ ಎಫ್.ಎಂ ರೇಡಿಯೋ -
7 -12-2015


ರೆಡೀಮೇಡ್ ಅಥವಾ ಸಿದ್ದ ಉಡುಪುಗಳ್ಲಲ್ಲಿ  ಸ್ಮಾರ್ಟ್ / ಇಂಟೆಲೆಜೆಂಟ್, ಅಥವಾ ನಿರ್ವಹಿಸುವ ( ಪರ್ಫಾರ್ಮಿಂಗ್) ಬಟ್ಟೆಗಳ ಬಳಕೆ.

ನಿಮ್ಮ ಯಾವುದಾದರೂ ರೆಡೀಮೇಡ್ ಉಡುಪಿನ ಬೆಲೆಯ ಶೇ. 40%-50% ಬರೀ ಅದರಲ್ಲಿ ಉಪಯೋಗಿಸಿರುವ  ಬಟ್ಟೆಗೆ ಹೋಗುತ್ತದೆ.

ನಮ್ಮ ಉಡುಪು ಅಂದರೆ ಅದು ಸ್ವಲ್ಪ ಬಣ್ಣದ್ದಾಗಿರ ಬೇಕು, ಡಿಸೈನ್ ಇರಬೇಕು, , ಬಿಸಿಲು, ಚಳಿಯಿಂದ ನಮ್ಮನ್ನು ರಕ್ಷಿಸಬೇಕು, ಇಷ್ಟ್ತೆ ನಾವು ಬಯಸುತ್ತಿದ್ದದು.. ಆದರೆ ಇಂದು ಒಬ್ಬ ಗ್ರಾಹಕನ ಅಪೇಕ್ಷೆ ಬೇರೆಯದೇ ಆಗಿರುತ್ತದೆ. ಅವನು ಆದರಿಂದ ಬಹಳಷ್ಟು ಹೆಚ್ಚಿನದನ್ನೂ ಎದುರು ನೋಡುತ್ತಾನೆ. ಅವನು ಕೊಡುವ ಹಣಕಿಂತ ಅದಿಕ ಬೆಲೆ  value ಅದು ಕೊಡಬೇಕು ಎಂದು ನಿರೀಕ್ಷಿಸುತ್ತಾನೆ. ಅದಕ್ಕಾಗಿಯೇ ಇಂದು ಜವಳಿ ಅಥವಾ ಸಿದ್ದ ಉಡುಪು, ರೆಡೀಮೇಡ್ ಗಾರ್ಮೆಂಟ್ ಕ್ಷೇತ್ರದಲ್ಲಿ ಸಕ್ರಿಯ( ಆಕ್ಟಿವ್), ಸ್ಮಾರ್ಟ್, ಪರ್ಫಾರ್ಮಿಂಗ್ , ಕಾರ್ಯನಿರತ ಬಟ್ಟೆಗಳ ಒಂದು ವಿಶೇಷ ವಿಭಾಗವೇ ಎದ್ದು ನಿಂತಿದೆ.
ನಾನು ಪ್ರೊ: ನೆಲಮನೆ ಶ್ರೀನಿವಾಸನ್ , ಡೀನ್ , ಆರ್ಮೀ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಅಂಡ್ ಡಿಸೈನ್,  ಇಂದು ನಿಮ್ಮೊಡನೆ ಈ ಸ್ಮಾರ್ಟ್ ಅಥವಾ ಕಾರ್ಯನಿರತ ಆಕ್ಟಿವ್ ಬಟ್ಟೆ , ಜವಳಿ ಬಗ್ಗೆ ಮಾತನಾಡುವನ್ನಿದ್ದೇನೆ

. ಮೊದಲಿಗೆ ಈ ಸ್ಮಾರ್ಟ್ ಟೆಕ್ಸ್‌ಟೈಲ್ ನ ಅವಶ್ಯಕತೆ , ಉದ್ದೇಶ ಏನು ಎಂಬುದನ್ನು ತಿಳಿದುಕೊಳ್ಳೋಣ.
ಜಾಗತೀಕರಣ, ಖಾಸಗೀಕರಣ ( Globalization, privatization )ಇದರ  ಫಲ ಶ್ರುತಿ,  ನಮ್ಮ ಆರ್ಥಿಕ, ಸಾಮಾಜಿಕ ಹಾಗೂ ತಾಂತ್ರಿಕ ವಲಯಗಳಮೇಲೆ ಬೀರಿದ ಪರಿಣಾಮ ಬ್ರ್ಯಾಂಡ್ ಕಲ್ಚರ್ ಆರಂಬವಾದದ್ದು. ಯಾವಾಗ ಖರೀದಿಸುವ ಸಾಮರ್ಥ್ಯ( Purchase power)  ವೃದ್ದಿಸಿತೋ, ಉಳಿಸುವ ಹವ್ಯಾಸಕಿಂತ ಖರ್ಚುಮಾಡುವ ಮನಸ್ಥಿತಿ ( Savings to spending economy) ಬಂದಿತೋ ಅಂದು ಇಂಡೂಸ್ತ್ರಿ ಕೂಡ ಗ್ರಾಹಕನಿಗೆ ಬೇಕಾದಂತ ವಸ್ತುವನ್ನು ನೀಡಲು ಪೈಪೋಟಿ ಪ್ರಾರಂಬವಾಯಿತು. ಜೊತೆಗೆ ( Technology, IT, Nano technology, Microencapsulation, Molecular restructuring) ಇವೆಲ್ಲ ಕೂಡ ಸ್ಮಾರ್ಟ್ ಟೆಕ್ಸ್‌ಟೈಲ್ಸ್ ಸಿದ್ದ ಉಡುಪಿನ ಕ್ಷೇತ್ರಕ್ಕೆ ಲಗ್ಗೆ ಇಡಲು ಸಹಕಾರಿಯಾಯಿತು. ಮೊದಲಿಗೆ ಉಡುಪು ಎಂದರೆ ಅದು ಬರಿ ನಮ್ಮ ದೇಹವನ್ನು ಮುಚ್ಚಲು, ಬಿಸಿಲು, ಚಳಿ, ಗಾಳಿಯಿಂದ ರಕ್ಷಿಸಲು ಮಾತ್ರ ಎಂಬ ಕಲ್ಪನೆ ಇತ್ತು . ಆದರೆ ಸ್ಮಾರ್ಟ್ ಟೆಕ್ಸ್‌ಟೈಲ್ಸ್ ನಮ್ಮ ದೇಹದ ಜೊತೆಗೆ ಅದು ಕೂಡ ಕೆಲಸ ಮಾಡುತ್ತದೆ. ನಮ್ಮೊಂದಿಗೆ ಸಂಭಾಷಿಸುತ್ತದೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತದೆ. ನಮ್ಮನ್ನು ಇನ್ನೂ ಹೆಚ್ಚು, ಹೆಚ್ಚು, ಸುಂದರವಾಗಿ, ವಿಭಿನ್ನವಾಗಿ ತೋರ್ಪಡಿಸುತ್ತದೆ.
ಈ ಸ್ಮಾರ್ಟ್ ಟೆಕ್ಸ್‌ಟೈಲ್ಸ್ ಹೇಗೆ ವಿಭಿನ್ನವಾಗಿವೆ, ಕೆಲಸ ಮಾಡುತ್ತವೆ ಎಂಬುದನ್ನು ಎರಡು ವಿದವಾಗಿ ವಿಂಗಡಿಸಬಹುದು.
 1)
ರೂಪ ಹಾಗೂ ಲಕ್ಷಣ ಗಳನ್ನು ಬದಲಾಯಿಸುವುದು.( Aesthetic appearance)
 2)
ಇನ್ನೂ ಕಾರ್ಯ ಕ್ಷಮತೆ, ಅಥವಾ ಕ್ರಿಯಾಶೀಲತೆಯನ್ನು ( Performance, Active wear)ಬಳಸುವ ಸ್ಮಾರ್ಟ್ ಟೆಕ್ಸ್‌ಟೈಲ್ಸ್

1) ರೂಪ ಹಾಗೂ ಲಕ್ಷಣ ಗಳನ್ನು ಬದಲಾಯಿಸುವುದು.
ದೇಹದ ಹಾಗೂ ಬಿಸಿಲಿನ ಶಾಖಕ್ಕೆ ಬಣ್ಣ ಬದಲಾಯಿಸುವುದು, ( Thermo chromic) ( ಥರ್ಮೊ ಚ್ರೋಮಿಕ್ ಫ್ಯಾಬ್ರಿಕ್ಸ್) , ದೇಹದ ಅದುರುವಿಕೆಗೆ, ಕಂಪನಕ್ಕೆ ಸ್ಪಂದಿಸುವುದು, ಸ್ಪರ್ಶ ಅಥವಾ ಶಬ್ದಕ್ಕೆ ಸ್ಪಂದಿಸುವುದು. ಇತ್ಯಾದಿ.  ಇದಕ್ಕೆ  ಕೆಲವು ಉದಾಹರಣೆಗಳು ಅಂದರೆ
a) ವೈಟ್ ಕೇನ್ ಗಾರ್ಮೆಂಟ್ಸ್ ಅಂತ, ಅಂದರೆ ಇದನ್ನು ವಿಶೇಷವಾಗಿ ಅಂದರಿಗಾಗಿ ತಯಾರಿಸಿರುವಂತಾದ್ದು. ರಾತ್ರಿಯ ವೇಳೆ ಅಂಧರು ದಾರಿಯಲ್ಲಿ ನಡೆಯುವಾಗ, ಅವರ ಉಡುಪಿನಿಂದ ಬಿಳಿ ಕೋಲಿನಂತೆ ಬೆಳಕು ಚೆಲ್ಲುತದೆ ಇದು ಎದುರಿನಿಂದ ಬರುವವರಿಗೆ ಕಾಣಿಸುತ್ತದೆ.
b) ಉಸರವಳ್ಲಿಯಂತೆ ಸುತ್ತಲಿನ ಬಣ್ಣಕ್ಕೆ ತಕ್ಕಂತೆ ಬಣ್ಣ ಬದಲಾಯಿಸುತ್ತದೆ. ( Camouflage) . ಇದು ಶತ್ರುಗಳೊಡನೆ ಹೋರಾಡುವಾಗ , ಯುದ್ದದಲ್ಲಿ ಸೇನೆಗೆ ಸಹಕಾರಿಯಾಗುತ್ತದೆ.
c) ಎಲ್. ಈ. ಡಿ, ಅಥವಾ, ಆಪ್‌ಟಿಕ್(optic)  ಫಿಬೇರ್ ಬಳಸಿ ಸ್ವಯಂಪ್ರಕಾಶವಾಗಿ ಬೆಳಗುವ ಬಟ್ಟೆ ಮಾಡಬಹುದು, ಅಥವಾ ಸೋಲಾರ್ ಫೈಬರ್ ಬಳಸಿ ಶಾಖ ಉತ್ಪಾದಿಸುವ, ಎಂ. ಪಿ 3 ಸೌಕರ್ಯವಿರುವ ಟ್-ಶರ್ಟ್, ಜ್ಯಾಕೆಟ್ ತಯಾರಿಸಬಹುದು. ಮೊಬೈಲ್ ರೀಚಾರ್ಜ್ ಮಾಡಬಹುದು.
d) ಚಿಕ್ಕ ಮಕ್ಕಳಿಗೆ, ಹಿರಿಯರಿಗೆ ಮೈ ಬೆಚ್ಚಗಿಡುವ ಶಾಖ ನೀಡುವ ಉಡುಪು ತಯಾರಿಸಬಹುದು. Inherently Conductive Polymers (ICP) technology  ಬಳಸಿ  ಒಂದು ಹೊಸ ಆವಿಷ್ಕಾರ ಮಾಡಿದೆ ಅದೇನೆಂದರೆ ವಾತನುಕೂಲ ಬಟ್ಟೆ. ವಾತಾವರಣಕ್ಕೆ ತಕ್ಕಂತೆ ಉಷ್ಣತೆಯನ್ನು ಕಡಿಮೆ ಮಾಡುವ ಅಥವಾ ಹೆಚ್ಚಿಸುವ ತಾಂತ್ರಿಕತೆ ಯನ್ನು ಅಭಿವೃದ್ದಿಪಡಿಸಿದ್ದಾರೆ.
e) ಎಲ್. ಈ. ಡಿ ಮತ್ತು ಆಪ್‌ಟಿಕ್ ಫೈಬರ್ ಬಳಸಿ ಸ್ಕರ್ಟ್ ನ್ನು  ಒಂದು ಲಾಪ್ ಟಾಪ್ ನಂತೆ ಬಳಸ ಬಹುದಾಗಿದೆ. ಸ್ಕರ್ಟ್ ನ್ನು ಕೀ ಬೋರ್ಡ್  ಆಗಿ ಬಳಸಿ, ಗೋಡೆ ಅಥವಾ ಟೇಬಲ್ ನ್ನು , ಸ್ಕ್ರೀನ್ ಆಗಿ ಬಳಸ ಬಹುದಾಗಿದೆ.

2) ಇನ್ನೂ ಕಾರ್ಯ ಕ್ಷಮತೆ, ಅಥವಾ ಕ್ರಿಯಾಶೀಲತೆಯನ್ನು ಬಳಸುವ ಸ್ಮಾರ್ಟ್ ಟೆಕ್ಸ್‌ಟೈಲ್ಸ್
( Performaing & Active fabrics)
. ನೀವು ಇಂದು ಜಗತ್ತಿನ ಯಾವುದೇ ಬ್ರ್ಯಾಂಡ್ ತೆಗೆದುಕೊಳ್ಳಿ, ಅದು ಒಂದಲ್ಲ ಒಂದು ಬಗೆಯಲ್ಲಿ ಈ ಸ್ಮಾರ್ಟ್ ಟೆಕ್ಸ್‌ಟೈಲ್ಸ್ ನಾ ಉಪಯೋಗ ಮಾಡುತಿರುತ್ತದೆ. ಅದು ಏರ್ ಕಂಡೀಶಂಡ್ ಬಟ್ಟೆಯಾಗಿರಬಹುದು, ಕ್ರೀಡೆಗೆ ಸಂಭಂದ ಪಟ್ಟಿರಾ ಬಹುದಾದ ಉಡುಪು, ಪರ್ವತಾರೋಹಣ, ಟ್ರೆಕಿಂಗ್, ಮಿಲಿಟರೀ, ಸ್ಕ್ಯೂಬ ಡೈವಿಂಗ್, ಪ್ಯಾರ ಟ್ರೂಪಿಂಗ್, ಅರ್ಬನ್ ವೇರ್, ಯೂನಿಫಾರ್ಮ್,  ಫಾರ್ಮಲ್ ವೇರ್ ಯಾವುದೇ ವಿಧವಾದ ಅಥವಾ ಯಾವುದೇ ಸಂದರ್ಭಕ್ಕೆ ತಕ್ಕದಾದ ಉಡುಪು ತಯಾರಿಸಬೇಕೆಂದರೆ ಈ ಸ್ಮಾರ್ಟ್ ಟೆಕ್ಸ್‌ಟೈಲ್ ನಾ ಅವಶ್ಯಕತೆ ಇದೆ. ಈ ಸ್ಮಾರ್ಟ್ ಟೆಕ್ಸ್‌ಟೈಲ್ಸ್ ದೇಹದ ಜೊತೆಗೆ ತಾನು ಕೆಲಸ ಮಾಡಿ ಸಹಕರಿಸುತ್ತದೆ. ಇದೆಲ್ಲ ಮೌಲ್ಯಾದಾರಿತ (   Value added   ) ಬಟ್ಟೆಗಳು. ಇದರ ಕೆಲವು ಉಪಯೋಗಗಳನ್ನು ನೋಡೋಣ.

a) ಗೂಗಲ್ ಮತ್ತು ಲೀ ವೈಸ್ ನವರು ಜೊತೆಯಾಗಿ ಒಂದು ಬಟ್ಟೆ ತಯಾರಿಸಿದ್ದಾರೆ. ಅದನ್ನು ಉಪಯೋಗಿಸಿ ನಿಮ್ಮ ಮೊಬೈಲ್ ನಿಂದ ಕರೆ ಸ್ವೀಕಾರ ಮಾಡಬಹುದು ಅಥವಾ ತಿರಸ್ಕರಿಸ ಬಹುದು. ಅಂದರೆ ನಿಮ್ಮ ಶರ್ಟ್ ಅಥವಾ ಟಾಪ್ ನನ್ನು ಸವರಿದರೆ ಅಥವಾ ಸ್ಪರ್ಶಿಸಿದರೆ ಅದು ನಿಮ್ಮ ಮೊಬೈಲ್ ಗೆ ಸಂದೇಶ ಕೊಡುತ್ತದೆ.

b) ಈ ಸ್ಮಾರ್ಟ್ ಟೆಕ್ಸ್ಟೈಲ್ ನ ಬಹಳ ಉಪಯೋಗ ವೈದ್ಯಕೀಯ ಕ್ಷೇತ್ರದಲ್ಲಿ ಆಗಿದೆ. ಇದನ್ನು ಬಯೋ-ಸ್ಮಾರ್ಟ್ ಟೆಕ್ಸ್‌ಟೈಲ್ಸ್ ಅಂತಾನೂ ಕರಿತೇವೆ. ಬಹುಶ: ದೇಹದ ಎಲ್ಲ ಭಾಗಗಳಿಗೆ ಈ ಬಯೋ-ಸ್ಮಾರ್ಟ್ ಟೆಕ್ಸ್‌ಟೈಲ್ಸ್ ಬಳಸುವಿಕೆ ಈಗಾಗಲೇ ಶುರುವಾಗಿದೆ. ಫೈಬರ್ ಗಳನ್ನು ಬಳಸಿ ಮೆದುಳಿನ ಸಂದೇಶಗಳನ್ನು ಸಂಗ್ರಹಿಸಿ ಬುದ್ದಿ ಮಾಂದ್ಯ ರನ್ನು ನಿಯಂತ್ರಿಸಲು, ಅವರನ್ನು ಅರ್ಥ ಮಾಡಿಕೊಳ್ಳಲು , ಇನ್ನು  ಹೃದಯದ ಬಡಿತ ಹಾಗೂ ಏರಿಳಿತಗಳನ್ನು ದಾಖಲಿಸುವುದು, ಪೇಸ್ ಮೇಕರ್ ಮಾನಿಟರ್, ಮಾಡುವುದು ಇತ್ಯಾದಿ.

c) Drexel University in Philadelphia, USA  ಫ್ಯಾಶನ್ ಡಿಸೈನ್ ಹಾಗೂ wireless  ಟೆಕ್ನಾಲಜೀ ಬಳಸಿ ಒಂದು ಹೊಟ್ಟೆಗೆ ಕಟ್ಟಿ ಕೊಳ್ಳುವ ಬೆಲ್ಟ್ ಕಂಡುಹಿಡಿದ್ದಿದ್ದಾರೆ. ಇದನ್ನು ತುಂಬು ಗರ್ಭಿಣಿಯರು ಹೊಟ್ಟೆಗೆ ಕಟ್ಟಿಕೊಂಡಾಗ ಅದು ಭ್ರೂಣ ಧ ಚಲನವಲನ ವನ್ನು ಧಾಖಲಿಸಿ ಹೆರಿಗೆಯ ಮುನ್ಸೂಚನೆಯನ್ನು ನಿಖರವಾಗಿ ತಿಳಿಸುತ್ತದೆ.

d)
ಅಮೆರಿಕಾದ ಒಂದು ಸಂಸ್ಥೆ ಸ್ಮಾರ್ಟ್ ಕಾಲುಚೀಲಗಳನ್ನು ತಯಾರಿಸಿದೆ. ಇದು ಕ್ರೀಡಾಪಟುಗಳಿಗೆ ಅತ್ಯಂತ ಉಪಯೋಗಕಾರಿಯಾಗಿದೆ. ಅದರಲ್ಲಿರುವ ಪ್ರೆಶರ್ ಪಾಯಂಟ್ ಸೆನ್ಸರ್ ಗಳು, ಬ್ಲೂ ಟೂತ್ ನೆರವಿನಿಂದ ಕಾಲಿನ ಮೂಳೆಯ ಯಾವ ಜಾಗದಲ್ಲಿಹೆಚ್ಚು ಪ್ರೆಶರ್ ಬೀಳುತ್ತಿದೆ, ಕಾಲಿನ ಮಸಲ್ ಗಳ ಕಂಡೀಶನ್ ಹಾಗೂ ಇತರ ಮಾಹಿತಿಗಳನ್ನು ರವಾನಿಸುತ್ತದೆ.

e)
ಅಷ್ಟೇಕೆ ಒಬ್ಬ ಇಂಜಿನಿಯರ್ ಅವನ ಪತ್ನಿ ಯ ಗ್ಯಾಸ್ ನಾ ಬಾದೆ ತಾಳಲಾರದೆ Carbon fiber ಬಳಸಿ ದುರ್ಗಂಧ ಶೋದಿಸುವ ಬಟ್ಟೆ ತಯಾರಿಸಿ ಅದರಿಂದ ಪಾಂಟೀಸ್ ಉತ್ಪಾದಿಸಿದ ಹಾಗು ನಿರಾಳವಾಗಿ ಉಸಿರಾಡಿದ.

f) ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸ್ಮಾರ್ಟ್ ಟೆಕ್ಸ್‌ಟೈಲ್ ನ್ನು ಚರ್ಮಕ್ಕೆ ನಿಯಮಿತವಾಗಿ ವಿಟಮಿನ್ ಕೊಡಲು, ರೇಡೀಯೇಶನ್ ಪರಿಣಾಮ ತಡೆಯಲು, ದೇಹದ ತೀವ್ರ ಸುಟ್ಟ ಬಾಗಗಳನ್ನು ರಕ್ಷಣೆ ಮಾಡಲು, ಉಪಯೋಗಿಸುತ್ತಾರೆ.

g) America North Carolina university
ನಲ್ಲಿ ಡೈಯಬಿಟೀಸ್ ರೋಗಿಗಳ ಗ್ಲೂಕೋಸ್ ಪ್ರಮಾಣ ಧಾಖಲಿಸಲು  ಸ್ಮಾರ್ಟ್ ಟೆಕ್ಸ್‌ಟೈಲ್ ಬಳಸಿ  ಒಳ ಉಡುಪು ಸಿದ್ದ ಪಡಿಸುವ ಕಾರ್ಯ ಚಾಲ್ತಿಯಲ್ಲಿದೆ.

h)
ಸ್ಮಾರ್ಟ್ ಟೆಕ್ಸ್‌ಟೈಲ್ ಬಳಕೆ ರಕ್ತ ಹೆಪ್ಪುಗಟ್ಟಿಸಲು ಸಹ ಉಪಕಾರಿಯಾಗಬಲ್ಲದು ಎಂಬ ಮಾಹಿತಿ ಇದೆ.

i)
ದೇಹದ ಬೆವರು  ಹೀರುವಿಕೆ ಹಾಗೂ ಸಂಗ್ರಹಣೆ ಸ್ಪೋರ್ಟ್ಸ್ ವೇರ್ ನಲ್ಲಿ ಧಾಖಲಿಸಿದ ಒಂದು ದೊಡ್ಡ ಸಾದನೆ. ಮೊದಲು ಸಚಿನ್ ತೆಂಡೂಲ್ಕರ್, ಅಥವಾ ರಾಹುಲ್ ದ್ರಾವಿಡ್ ಆಡುತ್ತಿದ್ದರೆ ಆವರ ಡ್ರೆಸ್ ಬೆವರಿನಿಂದ ನೆಂದು ತೊಪ್ಪೆ ಯಾಗಿರುತಿತ್ತು. . ಇಂದು ಆ ಪ್ರಸಂಗ ಇಲ್ಲ. ಆಟಗಾರರಿಗೆ ಮುಜುಗರವೂ ಇಲ್ಲ, ಕಂಫರ್ಟ್ ಇದೆ. ಇದನ್ನು  SMS ( Sweat Management Shirts) ಕರೆಯುತ್ತಾರೆ.



ಭಾರತ ದಲ್ಲಿ ಈಗಾಗಲೇ ಬಳಕೆ ಯಲ್ಲಿರುವ ಸ್ಮಾರ್ಟ್ ಫಾಬ್ರಿಕ್ಸ್, ಗಳೆಂದರೆ,
 
1.
ಬೆಂಗಳೂರಿನ ಒಂದು ಕಂಪನಿ ಸೊಳ್ಳೆಗಳನ್ನು ಓಡಿಸುವ, ದೂರವಿಡುವ ಶರ್ಟ್ ತಯಾರಿಸಿ ಭಾರತ, ಕೀನ್ಯಾ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮುಂತಾದ ಕಡೆ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇನ್ನು ನಿಂಬೆ, ಸ್ತ್ರಬೇರಿ, ದೇ ಒದೆರಂಟ್ ಮುಂತಾದ ವಿವಿಧ ಪರಿಮಳ ಸೂಸುವ ಬಟ್ಟೆಗಳು, ಆಮ್ಲಜನಕ ಹೊರಸೂಸುವ Oxy-Rich ಶರ್ಟ್ ಗಳು, Cool Pants ಪ್ಯಾಂಟ್ ಗಳು, Tropical fabrics ಗಳು, SMS, Sweat management shirt, ದಿನವಿಡೀ ಸುಕ್ಕಗಾದೆ , ಕೊಳೆಯಾಗದೆ, ಗರಿ, ಗರಿ ಯಾಗಿರುವ, ಉಡುಪುಗಳು, ರೋಗಿ ಗಳಿಗೆ, ವೈದ್ಯರಿಗೆ Anti Microbial treated,  Isolation patient ಸೇಫ್ಟಿ ಡ್ರೆಸ್ ಗಳು ಪ್ರಖ್ಯಾತ ಸಿದ್ಧ ಉಡುಪು ತಯಾರಿಕ ಕಂಪನಿಗಳಲ್ಲಿ ಲಭ್ಯ.

ಇದನ್ನು ಯಾವ ರೀತಿ ತಯಾರಿಸುತ್ತಾರೆ?

ಸ್ಮಾರ್ಟ್ ಟೆಕ್ಸ್‌ಟೈಲ್ಸ್ ನ್ನು ಡಿಸೈನ್ ತಯಾರಿಸಿ, ಸೂಕ್ತ ಫೈಬರ್  ನಿಂದ ದಾರ ತಯಾರಿಸಿ, , ನೇಯ್ಗೆ, ಆಥವ ಹೆಣೆಯುವುದು, ನಿಟ್ಟಿಂಗ್ , ಬಟ್ಟೆಯನ್ನು ಸಂಸ್ಕರಿಸುವುದು, ಮೈಕ್ರೋ ಎನ್‌ಕ್ಯಾಪ್ಸುಲೇಶನ್, ಮಾಲೆಕ್ಯುಲರ್ ರೇ-ಸ್ಟ್ರಕ್ಚರಿಂಗ್, ಮುಂತಾದ ವಿದನಾಗಳಿಂದ ಮಾಡುತ್ತಾರೆ. ಇದನ್ನು ರಿವರ್ಸ್ ಇಂಜಿನಿಯರಿಂಗ್ ಎಂದು ಕರೆಯುತ್ತಾರೆ. ಅಂದರೆ ಅಂತಿಮವಾಗಿ ನಮಗೆ ಏನು ಬೇಕು ಎಂಬುದನ್ನು ನಿರ್ದರಿಸಿ, ಅದಕ್ಕೆ ಅನುಗುಣವಾಗಿ ಹಿಂದಿನ ಎಲ್ಲ ತಂತ್ರ ಗ್ಯಾನವನ್ನು ಕ್ರೋಡೀಕರಿಸುವುದು.
 
ಬಹುಶಹ 2020 ಸುಮಾರಿಗೆ, ರೆಡಿ ಮೇಡ್ ಮಾರುಕಟ್ಟೆಯ ಶೇ 27-30% ರಷ್ಟನ್ನು ಪಾರಂಪರಿಕ ಬಟ್ಟೆಗಳಿಂದ , ಸ್ಮಾರ್ಟ್ ಫ್ಯಾಬ್ರಿಕ್ಸ್ ಪಡೆಯುವ ಸಾದ್ಯತೆಗಳಿವೆ ಎಂದು ಎಕ್ಸ್‌ಪರ್ಟ್ಸ್ ಹೇಳುತ್ತಾರೆ, ಅಂದರೆ ಅದು ಬೆಳೆಯುವ ವೇಗ ತಿಳಿಯುತ್ತದೆ.

ಇಂದು ಸ್ಮಾರ್ಟ್ ಫ್ಯಾಬ್ರಿಕ್ಸ್ ಎಸ್ಟು ಪ್ರಸಿದ್ದಿ ಹಾಗೂ ಉಪಯೋಗಕಾರಿ ಎಂದರೆ, ಅದಕ್ಕಾಗಿಯೇ ವಿಶೇಷ ಫ್ಯಾಶನ್ ಶೋ ಏರ್ಪಡಿಸುತ್ತಾರೆ, ಸೆಪ್ಟೆಂಬರ್ ತಿಂಗಳಿನಲ್ಲಿ ಪ್ಯಾರಿಸ್ ನಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಟ್ರೇಡ್ ಶೋ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕೆಲವು ವಿಶ್ವ ಪ್ರಸಿದ್ದ ಯೂನಿವರ್ಸಿಟೀ ಗಳು, like Cornell university, Wisconsin, Pratt institute and various other research organization of USA, Belgium Canada, , Italy, Germany, Egypt, Israel, Japan, Taiwan, China, Korea, ಇವುಗಳು     
ಸ್ಮಾರ್ಟ್ ಟೆಕ್ಸ್‌ಟೈಲ್ಸ್, ಸ್ಮಾರ್ಟ್ ಫ್ಯಾಬ್ರಿಕ್ಸ್, ಪರ್ಫಾರ್ಮೆನ್ಸ್ ಟೆಕ್ಸ್‌ಟೈಲ್ಸ್, ಇಂಟೆಲಿಜೆಂಟ್ ಟೆಕ್ಸ್‌ಟೈಲ್ಸ್ ಬಗ್ಗೆ ಬಹಳ ಸಂಶೋದನೆಗಳನ್ನು ಮಾಡುತ್ತಲಿವೆ.

 ನಮ್ಮ Textile Association India, ದ Karnataka   ಶಾಖೆಯು   ಬರುವ ಜನವರಿ 22 ಮತ್ತು 23 ರಂದು NIMHANS CONVENTION HALL ನಲ್ಲಿ ಎರಡು ದಿನಗಳ International Conference ಏರ್ಪಡಿಸಿರುತ್ತದೆ. ಈ ಎರಡು ದಿನಗಳ ಕಾರ್ಯಾಗಾರದಲ್ಲಿ ಅಂತರರಾಷ್ಟ್ರಿಯಮಟ್ಟದ ವಿಜ್ಞಾನಿಗಳು ಹಾಗೂ, ಸಂಸ್ಥೆಗಳು ಪಾಲ್ಗೊಂಡು Functional Textiles and Apparels, ಮತ್ತು ಅದರಲ್ಲಿನ Opportunities and challenges.  ಬಗ್ಗೆ ವಿಚಾರ  ವಿನಿಮಯ ನಡೆಸುತ್ತಾರೆ. ಈ ವಿಭಾಗದಲ್ಲಿ ವ್ಯಾಪಾರ ವಹಿವಾಟಿಗೆ ಕೂಡ ಹೊಸ ಹೊಸ ದಿಶೆಗಳನ್ನು ನೋಡ ಬಹುದಾಗಿದೆ. ಆಸಕ್ತರು ಬಾಗವಹಿಸಬಹುದು.

 ಇಷ್ಟು ಹೊತ್ತು ಸ್ಮಾರ್ಟ್, ಪರ್ಫಾರ್ಮಿಂಗ್ ಫಾಬ್ರಿಚ್ಸ್ ಬಗ್ಗೆ ನನ್ನ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿ ಕೊಳ್ಳಲು ಅವಕಾಶ ಮಾಡಿ ಕೊಟ್ಟಿದ್ದಕಾಗಿ ಆಕಾಶವಾಣಿ  ಎಫ್ ಎಂ. ಕೇಂದ್ರದವರಿಗೆ ಹಾಗು ಎಲ್ಲ ಶೋತೃ ಭಾಂದವರಿಗೆ ನನ್ನ ಹೃತ್ಪೂರ್ವಕ ವಂದನೆಗಳು.

ಪ್ರೊ: ನೆಲಮನೆ ಶ್ರೀನಿವಾಸನ್,
ಆಕಾಶವಾಣಿ ಎಫ್.ಎಂ ರೇಡಿಯೋ -ಬೆಂಗಳೂರು.
7 -12-2015








Comments

Popular posts from this blog

Kote Varada Raja Swamy Temple, satyagala