Posts

Showing posts from January, 2021

ರೆಡಿಮೇಡ್ ಉಡುಪುಗಳಲ್ಲಿ ಸ್ಮಾರ್ಟ್, ಪರ್ಫಾರ್ಮಿನ್ಗ್, ಇಂಟೆಲಿಜೆಂಟ್ ಬಟ್ಟೆಗಳ ಬಳಕೆ

Image
  ರೆಡಿಮೇಡ್ ಉಡುಪುಗಳಲ್ಲಿ ಸ್ಮಾರ್ಟ್, ಪರ್ಫಾರ್ಮಿನ್ಗ್, ಇಂಟೆಲಿಜೆಂಟ್ ಬಟ್ಟೆಗಳ ಬಳಕೆ  ಪ್ರೊ : ನೆಲಮನೆ ಶ್ರೀನಿವಾಸನ್ ,   ಡೀನ್ , ಆರ್ಮೀ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಅಂಡ್ ಡಿಸೈನ್ , ಬೆಂಗಳೂರು . – ೭೭ ಆಕಾಶವಾಣಿ ಎಫ್ . ಎಂ ರೇಡಿಯೋ - 7 -12-2015 ರೆಡೀಮೇಡ್ ಅಥವಾ ಸಿದ್ದ ಉಡುಪುಗಳ್ಲಲ್ಲಿ   ಸ್ಮಾರ್ಟ್ / ಇಂಟೆಲೆಜೆಂಟ್ , ಅಥವಾ ನಿರ್ವಹಿಸುವ ( ಪರ್ಫಾರ್ಮಿಂಗ್ ) ಬಟ್ಟೆಗಳ ಬಳಕೆ . ನಿಮ್ಮ ಯಾವುದಾದರೂ ರೆಡೀಮೇಡ್ ಉಡುಪಿನ ಬೆಲೆಯ ಶೇ . 40%-50% ಬರೀ ಅದರಲ್ಲಿ ಉಪಯೋಗಿಸಿರುವ   ಬಟ್ಟೆಗೆ ಹೋಗುತ್ತದೆ . ನಮ್ಮ ಉಡುಪು ಅಂದರೆ ಅದು ಸ್ವಲ್ಪ ಬಣ್ಣದ್ದಾಗಿರ ಬೇಕು , ಡಿಸೈನ್ ಇರಬೇಕು , , ಬಿಸಿಲು , ಚಳಿಯಿಂದ ನಮ್ಮನ್ನು ರಕ್ಷಿಸಬೇಕು , ಇಷ್ಟ್ತೆ ನಾವು ಬಯಸುತ್ತಿದ್ದದು .. ಆದರೆ ಇಂದು ಒಬ್ಬ ಗ್ರಾಹಕನ ಅಪೇಕ್ಷೆ ಬೇರೆಯದೇ ಆಗಿರುತ್ತದೆ . ಅವನು ಆದರಿಂದ ಬಹಳಷ್ಟು ಹೆಚ್ಚಿನದನ್ನೂ ಎದುರು ನೋಡುತ್ತಾನೆ . ಅವನು ಕೊಡುವ ಹಣಕಿಂತ ಅದಿಕ ಬೆಲೆ  value ಅದು ಕೊಡಬೇಕು ಎಂದು ನಿರೀಕ್ಷಿಸುತ್ತಾನೆ . ಅದಕ್ಕಾಗಿಯೇ ಇಂದು ಜವಳಿ ಅಥವಾ ಸಿದ್ದ ಉಡುಪು , ರೆಡೀಮೇಡ್ ಗಾರ್ಮೆಂಟ್ ಕ್ಷೇತ್ರದಲ್ಲಿ ಸಕ್ರಿಯ ( ಆಕ್ಟಿವ್ ), ಸ್ಮಾರ್ಟ್ , ಪರ್ಫಾರ್ಮಿಂಗ್ , ಕಾರ್ಯನಿರತ ಬಟ್ಟೆಗಳ ಒಂದು ವಿಶೇಷ ವಿಭಾಗವೇ ಎದ್ದು ನಿಂತಿದೆ ...